Friday, July 29, 2016

ತಮಿಳುನಾಡಿನವರು ಕಾವೇರಿ ನೀರಿಗಾಗಿ ಬಂದ್, ಮುಷ್ಕರ, ಹೋರಾಟಗಳನ್ನು ಮಾಡುತ್ತಾರೆಯೆ? ಇಲ್ಲವಲ್ಲ. ಅವರು ಮಾಡುವುದು ರಾಜಕೀಯ ತಂತ್ರಗಳು, ಅದು ಕೈಗೂಡದಿದ್ದರೆ ಸುಪ್ರೀಂಕೋರ್ಟ್ ನಲ್ಲಿ ನೀರಿಗಾಗಿ ತಗಾದೆ ಸಲ್ಲಿಸುವುದು. ಅದೇನು ಮಾಯೆಯೋ ಗೊತ್ತಿಲ್ಲ, ಕೋರ್ಟ್ ತಮಿಳುನಾಡು ಅರ್ಜಿಯನ್ನು ಕೂಡಲೇ ವಿಚಾರಣೆಗೆ ಅಂಗೀಕರಿಸುತ್ತದೆ. ನಂತರ ಏನೋ ಒಂದು ತೀರ್ಮಾನವಾಗಿ ತಮಿಳುನಾಡಿಗೆ ಒಂದಷ್ಟು ಗಿಟ್ಟುತ್ತದೆ..........................
..............................................................................................
ಅದೇ ರೀತಿಯ ತಂತ್ರಗಳನ್ನು ನಾವ್ಯಾಕೆ ಹೂಡಬಾರದು? ನಮ್ಮಲ್ಲಿ ಬುದ್ಧಿವಂತರು, ಜ್ಞಾನಿಗಳು, ವಿಷಯ ಪರಿಣತರು ಇಲ್ಲವೆ? ಎಲ್ಲರೂ ಇದ್ದಾರೆ, ನಮಗೂ ಸಾಧ್ಯವಿದೆ. ಆದರೆ ಅವುಗಳನ್ನು ಬಳಸುವ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ದೆಹಲಿಯ ಹೈ ಕಮಾಂಡ್ ಗೆ(ಅದು ಯಾವ ಪಕ್ಷದ್ದಾದರೂ ಒಂದೇ) ಮುಜುಗರವಾಗ್ತದೆಯೆಂಬ ಹೆದರಿಕೆ. ಬಂದ್, ಹೋರಾಟಗಳಿಂದ ರಾಜಕೀಯ ಲಾಭ ಪಡೆವ ಕೀಳು ಮನಸ್ಥಿತಿ. ಚಳುವಳಿಯ ನೆಪದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಲೂಟಿ,ಧ್ವಂಸ. ಹೀಗಾದರೆ ಎಂದೂ ಉದ್ಧಾರವಾಗದು.

No comments:

Post a Comment